ಸಕ್ರೆಬೈಲು ಆನೆ ಬಿಡಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ರು. ಶೂಟಿಂಗ್ ಕಾರಣಕ್ಕೆ ಅವರು ಸಕ್ರೆಬೈಲಿಗೆ ಭೇಟಿ ನೀಡಿದ್ರು.
ಸರ್ಕಾರದ ಡಾಕ್ಯುಮೆಂಟರಿಯೊಂದರ ಚಿತ್ರೀಕರಣಕ್ಕಾಗಿ ಅವರು ಸಕ್ರೆಬೈಲಿಗೆ ಬಂದಿದ್ರು. ಇನ್ನು ಅಪ್ಪು ಬರುತ್ತಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಯಾರನ್ನೂ ಒಳಗೆ ಬಿಡಲಾಗಿಲ್ಲ. ಇದರಿಂದಾಗಿ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಪರದಾಡುವಂತಾಯಿತು.